

23rd June 2025

ಬೆಂಗಳೂರು- ಇತ್ತೀಚೆಗೆ ಅಂಡಮಾನಿನ ಪೋರ್ಟ್ ಬ್ಲೇರ್ (ಶ್ರೀ ವಿಜಯಪುರಂ) ನಲ್ಲಿ ವಿಶ್ವ ಕನ್ನಡ ಕಲಾ ಸಂಸ್ಥೆ ಹಾಗೂ ಮನ್ವಂತರ ಮೀಡಿಯಾ ಇವರ ಸಂಯುಕ್ತಾಶ್ರಯದಲ್ಲಿ
"ಕನ್ನಡ ಸಂಭ್ರಮೋತ್ಸವ" ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಮನ್ವಂತರ ಮೀಡಿಯಾ ಅಕಾಡೆಮಿ ಅಧ್ಯಕ್ಷರಾದ ಕೆ ಸಿ ವೇದಮೂರ್ತಿ ರವರು ಕನ್ನಡ ಸಂಭ್ರಮೋತ್ಸವ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ "5,000 ವರ್ಷಗಳ ಹಿಂದೆ ನಮ್ಮ ಕನ್ನಡದಲ್ಲಿ ಜನಪದರ ಬಾಯಲ್ಲಿ ಬಂದಂತಹ ಕಾವ್ಯದಲ್ಲಿ ಬರುವಂತೆ...... "ಬೆಳಗಾಗಿ ನಾವೆದ್ದು ಯಾರ್ಯಾರ ನೆನೆಯಲಿ.....ಎಂಬ ಜಾನಪದ ನುಡಿಯಂತೆ "ಹೆತ್ತ ತಾಯಿಯ ಜೊತೆ ಭೂಮಿತಾಯಿಯನ್ನು ಯಾರ್ಯಾರು ಹೆಚ್ಚು ಮಹತ್ವ ಕೊಟ್ಟು ಗೌರವಿಸುತ್ತಾನೋ ಹಾಗೂ ಪ್ರೀತಿಸುತ್ತಾನೋ ಅವನು ಸಮಾಜದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸುತ್ತಾನೆ ಎಂದರು.
ವಿಶ್ವ ಕನ್ನಡ ಕಲಾ ಸಂಸ್ಥೆಯ ಸ್ಥಾಪಕರು ಹಾಗೂ ಅಧ್ಯಕ್ಷರು ಆದಂತಹ ಈ.ರವೀಶ ಅಕ್ಕರ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಎಲ್ಲರೂ "ಶತ್ರುತ್ವವನ್ನು ತ್ಯಜಿಸಿ ಮಿತೃತ್ವದಿಂದ ಬಾಳೋಣ" "ಸ್ನೇಹ ನಮ್ಮ ಬಹುದೊಡ್ಡ ಆಸ್ತಿ" ಎಂದರು.
ಕಾರ್ಯಕ್ರಮದ ಅತಿಥಿಗಳಾಗಿದ್ದ ಪತ್ರಿಕೆ ಸಂಪಾದಕರಾದ ವೆಂಕಟಮುನಿ ರವರು ಸಾಹಿತ್ಯದ ಮಹತ್ವವನ್ನು ತಿಳಿಸಿದರು. ಈ ಸಂದರ್ಭದಲ್ಲಿ ಕಿರುತೆರೆ ಕಲಾವಿದರಾದ ವಿದುಷಿ ಶೋಭಾ ಲೋಲನಾಥ್ ಮತ್ತು ಭರತನಾಟ್ಯ ಹಾಗೂ ಮಹಾಭಾರತದಲ್ಲಿ ವಿಷ್ಣು ಪಾತ್ರಕ್ಕೆ ಕಂಠದಾನ ಮಾಡಿದ ಕಲಾವಿದರಾದ ದೇವುರೂಪಾಂತರ ಅವರು ಭರತನಾಟ್ಯ ನೃತ್ಯ ಮಾಡಿ ಎಲ್ಲರನ್ನೂ ರಂಜಿಸಿದರು.
ಹಿರಿಯೂರಿನ ವಿಶ್ವ ಕನ್ನಡ ಕಲಾ ಸಂಸ್ಥೆ ಇದೇ ರೀತಿಯಾಗಿ ಮುಂದಿನ ದಿನಗಳಲ್ಲಿ ಲಂಡನ್ ಮತ್ತು ಲಕ್ಷದ್ವೀಪಗಳಲ್ಲಿ ಕನ್ನಡ ಸಂಭ್ರಮೋತ್ಸವವನ್ನು ಆಚರಿಸಲು ನಿರ್ಧರಿಸಿದೆ.
ಕಾರ್ಯಕ್ರಮವನ್ನು ಚಳ್ಳಕೆರೆಯ ವಿಜಯಾಗುರು ನಿರೂಪಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ
ವೀರ ಸಾವರ್ಕರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು

ಕನ್ನಡದ ಪ್ರಥಮ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ನೆಲೆಸಿದ ರಾಷ್ಟ್ರಕವಿ ನಿವಾಸ "ಗಿಳಿವಿಂಡು "ಸಮಗ್ರ ಅಭಿವೃದ್ದಿಗಾಗಿ ಕೇರಳ - ಕರ್ನಾಟಕ ಮುಖ್ಯ ಮಂತ್ರಿಯವರಲ್ಲಿಗೆ ನಿಯೋಗ ಬೇಟಿಗೆ ನಿರ್ಧಾರ.

ಕಂಪ್ಲಿ ಶಾಸಕ ಜೆ.ಎನ್. ಗಣೇಶ್ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಬಳ್ಳಾರಿಯಲ್ಲಿ ಬೃಹತ್ ಪಾದಯಾತ್ರೆ